About Anjanappa M

ಸನ್ಮಾನ್ಯ ಶ್ರೀ ಎಂ ಆಂಜನಪ್ಪನವರ ತಂದೆ ದಿ।। ಮುನಿಯಪ್ಪ ಮತ್ತು ತಾಯಿ ದಿ।। ಸೊಣ್ಣಮ್ಮ. ಇವರು ಬಾಲ್ಯದಿಂದಲೂ ಬಡತನವನ್ನು ಹಾಸಿ ಹೊದ್ದು ಬೆಳೆದವರಾದ್ದರಿಂದಾಗಿ, ಬಡವರ ಮತ್ತು ದೀನ - ದುರ್ಭಲರ ಕಷ್ಟಗಳಿಗೆ ಬಹು ಬೇಗ ಸ್ಪಂದಿಸುವ ಗುಣ ತಾನಾಗಿಯೇ ಮೈಗೂಡುತ್ತದೆ. ಹಾಗಾಗಿ, ಈ ಸಮಾಜಕ್ಕೆ, ಅದರಲ್ಲೂ ಬಡವ - ಬಲ್ಲಿದರಿಗೆ , ಏನಾದರು ಸಹಾಯ ಮಾಡಬೆಂಕೆಂಬ ತುಡಿತ ಬಾಲ್ಯದಲ್ಲಿಯೇ ಆವರಿಸಿದ್ದರ ಪರಿಣಾಮವಾಗಿ, ವಿದ್ಯಾಭ್ಯಾಸದ ನಂತರ ಸಮಾಜ ಸೇವೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿದ ಜನ, ಇವರನ್ನು 1990 ರಲ್ಲಿ ಆಗಿನ್ನೂ ಗ್ರಾಮಾಂತರವಾಗಿದ್ದ ಉತ್ತರಹಳ್ಳಿ ತಾಲ್ಲೂಕ್ ಚುನಾವಣೆಗೆ ಆಯ್ಕೆ ಮಾಡಿದ್ದಲ್ಲದೆ ಗೆಲ್ಲಿಸಿಯೂ ಸಹ ಕಳಿಹಿಸಿಕೊಡುತ್ತಾರೆ . ನಂತರ ಇವರ ಸೇವೆಯನ್ನು ಗುರುತಿಸಿ ಅಂದಿನ ಜನತಾ ದಳ ಸರ್ಕಾರದ ಮಂತ್ರಿಗಳಾದ ಮಂತ್ರಿಗಳಾದ B N ಬಚ್ಚೇಗೌಡ, P G R ಸಿಂಧ್ಯಾ ಮತ್ತು ಇತರ ನಾಯಕರು ಇವರನ್ನು ತಾಲ್ಲೂಕ್ ಪಂಚಾಯತಿ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ.

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವಾಗ ಏಳು -ಬೀಳುಗಳು ಸಹಜ. ಹಾಗೆಯೇ ಇದಕ್ಕೆ ಶ್ರೀ ಆಂಜನಪ್ಪನವರು ಹೊರತಾಗಲಿಲ್ಲ. ಇವರ ರಾಜಕೀಯ ಹಾದಿಯಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಇವರು ತೀರಾ ನಂಬಿದವರಿಂದಲೇ ರಾಜಕೀಯದ ತಂತ್ರ - ಕುಂತಂತ್ರಗಳಿಗೆ ಬಲಿಯಾಗಿ ಆಗಷ್ಟೇ BBMP ಸುಪರ್ದಿಗೆ ಬಂದಿದ್ದ ಪದ್ಮನಾಭನಗರ ವಾರ್ಡಿನಿಂದ ಟಿಕೆಟ್ ವಂಚಿತರಾಗಬೇಕಾಗುತ್ತದೆ. ಆದರೆ ತಮ್ಮ ವಾರ್ಡಿನ ಮತದಾರರ ಕೋರಿಕೆ ಮೇರೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಲ್ಲಿ ಸೋಲನ್ನು ಕಾಣಬೇಕಾಗುತ್ತದೆ. ಆದರೂ ದೃತಿಗೆಡದೆ ತಮ್ಮ ವಾರ್ಡಿನ ಜನರ ಕಷ್ಟಗಳಿಗೆ ಮತ್ತಷ್ಟು ಸ್ಪಂದಿಸುವುದರ ಮೂಲಕ ಸಾರ್ವಜನಿಕರಿಗೆ ತೀರಾ ಹತ್ತಿರವಾಗುತ್ತಾರೆ . ಇದೇ ಸಮಯದಲ್ಲಿ ಪ್ರಸ್ತುತ BJP ಸರ್ಕಾರದಲ್ಲಿ ಪ್ರಭಾವಿ ಸಚಿವರು ಮತ್ತು ಪದ್ಮನಾಭನಗರದ ಪ್ರಸ್ತುತ "MLA" ಯವರಾದ ಶ್ರೀ R ಅಶೋಕ್ ರವರು ಪದ್ಮನಾಭನಗರ ಕ್ಷೇತ್ರದಿಂದ ಸ್ಪರ್ಧಿಸಿದಾಗ, ಅವರ ಗೆಲುವುಗೆ ಶ್ರೀ ಆಂಜನಪ್ಪನವರು ಬಹಳ ಶ್ರಮಿಸುತ್ತಾರೆ .

ಇದೆಲ್ಲವನ್ನು ತೀರಾ ಹತ್ತಿರದಿಂದ ಗಮನಿಸುತ್ತಿದ್ದ ಶ್ರೀ R ಅಶೋಕ ರವರು, ತಮ್ಮ ಕ್ಷೇತ್ರದ BBMP ವಾರ್ಡಿನಲ್ಲೇ ಸ್ಪರ್ಧಿಸಿಲು ಅವಕಾಶ ನೀಡಲು ಬಯಸಿರುತ್ತಾರೆ. ಆದರೆ, ಈ ವಾರ್ಡ್ ಮಹಿಳಾ ಮೀಸಲಾತಿ ವಾರ್ಡ್ ಆದ ಕಾರಣ ತಮ್ಮ ಶ್ರೀಮತಿಯವರಾದ ಶೋಭಾ ಆಂಜನಪ್ಪನವರನ್ನು ನಿಲ್ಲಿಸಿ ಗೆಲ್ಲಿಸುತ್ತಾರೆ. ಪ್ರಸ್ತುತ, ಶ್ರೀಮತಿ ಶೋಭಾ ಆಂಜನಪ್ಪನವರು ಮತ್ತು ಶ್ರೀ ಆಂಜನಪ್ಪನವರು ಸಚಿವರಾದ ಸನ್ಮಾನ್ಯ ಶ್ರೀ R ಅಶೋಕ್ ರವರ ಮಾರ್ಗದರ್ಶನ ಮತ್ತು ಸಹಕಾರದಲ್ಲಿ ಪದ್ಮನಾಭನಗರ ಕ್ಷೇತ್ರದ ಅಭಿವೃದ್ಧಿಯೊಂದಿಗೆ BJP ಪಕ್ಷವನ್ನು ಮತ್ತಷ್ಟು ಬಲಪಡಿಸುವ ಹಾಗು ತಮ್ಮ ವಾರ್ಡನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಹಾದಿಯಲ್ಲಿ ತೊಡಗಿಸಿಕೊಂಡಿದ್ದಾರೆ......