ಸುಮಾರು, 1990 ರಿಂದಲೂ ಕ್ಷೇತ್ರದ ಅಭಿವೃದ್ಧಿಗೆ ಗಮನಕೊಟ್ಟಿರುವ ಶ್ರೀ ಆಂಜನಪ್ಪ ಮತ್ತು ಶೋಭಾ ಆಂಜನಪ್ಪ ನವರು ಶ್ರೀ R ಅಶೋಕ್ ರವರ ಸಾರಥ್ಯದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಬಹಳ. ಅವುಗಳಲ್ಲಿ ಪ್ರಮುಖವಾದ ಅಭಿವೃದ್ಧಿ ಕೆಲಸಗಳು ಮತ್ತು ಅದಕ್ಕೆ ಸಂಬಂಧಪಟ್ಟ ಚಿತ್ರಗಳನ್ನುಈ ಪುಟದಲ್ಲಿ ನಮೂದಿಸಲಾಗಿದೆ.
Covid-19 ನ ಸಂದರ್ಭದಲ್ಲಿ, ತಮ್ಮ ಕ್ಷೇತ್ರವಲ್ಲದೆ ಚನ್ನಪಟ್ಟಣದ ವಾದ್ಯಗೋಷ್ಠಿ ಕಲಾವಿದರು ಮತ್ತು ಕನಕಪುರದ ಸರ್ಕಾರಿ ಶಾಲೆಯ ಮಕ್ಕಳ ಕಷ್ಟಕ್ಕೆ ಸ್ಪಂದಿಸಿದ್ದು, ಶ್ರೀ ಆಂಜನಪ್ಪನವರ ಮಾನವೀಯತೆಗೆ ಹಿಡಿದ ಸಾಕ್ಷಿ.
ಪದ್ಮನಾಭನಗರ ಫ್ಲೈ ಓವರ್ ಹತ್ತಿರ ಅಕ್ರಮವಾಗಿ ಹೊತ್ತುವರಿಯಾಗಿದ್ದ BBMP ಯ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನ ಯ ಬಗ್ಗೆ ಶ್ರೀ R ಅಶೋಕ್ ರ ಗಮನಕ್ಕೆ ತಂದಾಗ ಅವರು ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಆ ಅಸ್ಥಿಯನ್ನ ಕಾನೂನಾತ್ಮಕವಾಗಿ ಬಿಬಿಎಂಪಿ ಹಸ್ತಾಂತರ ಮಾಡುತ್ತಾರೆ. ಪ್ರಸ್ತುತ ಆ ಸ್ಥಳದಲ್ಲಿಪದ್ಮನಾಭನಗರದ ಸಾರ್ವಜನಿಕರಿಗಾಗಿ ಉದ್ಯಾನವನವನ್ನು ನಿರ್ಮಿಸಲಾಗುತಿದ್ದು ಹಾಗು ಆ ಉದ್ಯಾನವನಕ್ಕೆ ಇತ್ತೀಚಿಗೆ ಹೆಲಿಕಾಪ್ಟಾರ್ನಲ್ಲಿ ಮಡಿದ CDS General "Bipin Rawat" ಹೆಸರಿಡಲು ನಿರ್ಧರಿಸಲಾಗಿದೆ.
BBMP ವಾರ್ಡಿಗೆ ಸೇರಿದೆ ಗೋವಿನಾಯಕನಹಳ್ಳಿಯಲ್ಲಿ ಪಂಡಿತ್ ದೀನ ದಯಾಳ ಕ್ರೀಡಾಂಗಣವನ್ನು ನಿರ್ಮಿಸಲಾಗಿದ್ದು, ಅದರಲ್ಲಿಮಕ್ಕಳಿಗಾಗಿ ಬಾಸ್ಕೆಟ್ ಬಾಲ್ ಕ್ರೀಡಾಂಗಣ, ಸಾರ್ವಜನಿಕರಿಗಾಗಿ ಒಳಾಂಗಣ ಕ್ರೀಡಾಂಗಣ ಹಾಗು ಹಿರಿಯ ನಾಗರೀಕರಿಗಾಗಿ ವ್ಯಾಯಾಮ ಶಾಲೆಯನ್ನು ನಿರ್ಮಿಸಲಾಗಿದೆ.
BBMP ವಾರ್ಡಿಗೆ ಸೇರಿದೆ ಗೋವಿನಾಯಕನಹಳ್ಳಿ ಯಲ್ಲಿ ಪೇಜಾವರಶ್ರೀ ಉದ್ಯಾನವನ ನಿರ್ಮಿಸಲಾಗಿದ್ದು, ಅದರಲ್ಲಿ ಮಕ್ಕಳಿಗಾಗಿ ಕ್ರೀಡಾಂಗಣ ಮತ್ತು ಸಾರ್ವಜನಿಕರು ಹಾಗು ಹಿರಿಯ ನಾಗರೀಕರಿಗಾಗಿ ವ್ಯಾಯಾಮ ಶಾಲೆಯನ್ನು ನಿರ್ಮಿಸಲಾಗಿದೆ.
BBMP ವಾರ್ಡಿಗೆ ಸೇರಿದೆ K S R T C layout ಯಲ್ಲಿ ಉದ್ಯಾನವನ ನಿರ್ಮಿಸಲಾಗಿದ್ದು, ಅದರಲ್ಲಿ ಮಕ್ಕಳಿಗಾಗಿ ಕ್ರೀಡಾಂಗಣ ಮತ್ತು ಸಾರ್ವಜನಿಕರು ಹಾಗು ಹಿರಿಯ ನಾಗರೀಕರಿಗಾಗಿ ವ್ಯಾಯಾಮ ಶಾಲೆಯನ್ನು ನಿರ್ಮಿಸಲಾಗಿದೆ.
BBMP ವಾರ್ಡಿಗೆ ಸೇರಿದೆ ಗೌಡನಪಾಳ್ಯದ ಕೆರೆ ಅಭಿವೃದ್ಧಿ: ಗೌಡನಪಾಳ್ಯದ ಕೆರೆಯನ್ನು ಅಭಿವೃದ್ಧಿಗೊಳಿಸುವ ಕೆಲಸ ಪ್ರಗತಿಯಲ್ಲಿದ್ದು, ಪ್ರಸ್ತುತ ಡ್ರೈನೇಜ್ ತೆರವುಗೊಳಿಸಿ ಮಳೆನೀರು ಸಂಗ್ರಹಿಸುವುದರ ಮೂಲಕ ಸುತ್ತಮುತ್ತಲೂ ಅಂತರ್ಜಾಲದ ಮಟ್ಟವನ್ನು ಸುಧಾರಿಸುವ ಕೆಲಸ - ಕಾರ್ಯಗಳು ನಡೆಯುತ್ತಿವೆ.
B H S layout ಉದ್ಯಾನವನ ಮತ್ತು ವ್ಯಾಯಾಮ ಶಾಲೆ: BTS ಲೇಔಟ್ ನಲ್ಲಿ ಸುಸಜ್ಜಿತ ಲೈಬ್ರರಿ, ಮಕ್ಕಳಿಗಾಗಿ ಬಾಸ್ಕೆಟ್ ಬಾಲ್ ಕ್ರೀಡಾಂಗಣ , ಸಾರ್ವಜನಿಕರಿಗಾಗಿ ಒಳಾಂಗಣ ಕ್ರೀಡಾಂಗಣ ಹಾಗು ಹಿರಿಯ ನಾಗರೀಕರಿಗಾಗಿ ವ್ಯಾಯಾಮ ಶಾಲೆಯನ್ನು ನಿರ್ಮಿಸಲಾಗಿದೆ.
ವಾರ್ಡಿನ ಹಿರಿಯ ನಾಗರೀಕರಿಗಾಗಿ ಪ್ರತಿ ವರ್ಷ ಪ್ರವಾಸದ ವ್ಯವಸ್ಥೆ ಮಾಡಲಾಗುತ್ತಿದೆ.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷ ಉಚಿತ ಪಠ್ಯ-ಪುಸ್ತಕ ಮತ್ತು ಸಮವಸ್ತ್ರ ವಿತರಣೆ.
ಪದ್ಮನಾಭನಗರದ ಪಾರ್ಕ್ ಗಳಲ್ಲಿ ಪ್ರಮುಖವಾದ, ಲಕ್ಷ್ಮೀನಾರಾಯಣ ಉದ್ಯಾನವನ, R K ಲೇಔಟ್ ಮೊದಲ ಹಂತದ ಉದ್ಯಾನವನ ಹಾಗು ಎರಡನೇ ಹಂತದ ಉದ್ಯಾನವನ, ಟೆಲಿಕಾಂ ಲೇಔಟ್ ನ ಉದ್ಯಾನವನ ಮತ್ತು BHS ಲೇಔಟ್ 7ನೇ ಕ್ರಾಸ್ ಉದ್ಯಾನವನ ಹಾಗು 6ನೇ ಕ್ರಾಸ್ ಉದ್ಯಾನವನಗಳನ್ನು ಮೇಲ್ದರ್ಜೆಗೆ ಅಭಿವೃದ್ಧಿಪಡಿಸಾಲಾಗಿದೆ.
ದೊಡ್ಡಗೌಡನ ಪಾಳ್ಯದ ಎಲ್ಲಾ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಲ್ಲನ್ನಾಗಿ ಮೇಲ್ದರ್ಜೆಗೆ ಏರಿಸಿರುವುದಲ್ಲದೆ, ಉತ್ತಮ ಸ್ಯಾನಿಟರಿ ವ್ಯವಸ್ಥೆಯನ್ನು ಒದಗಿಸಲಾಗಿದೆ.
ಪದ್ಮನಾಭನಗರದ ಸಾರ್ವಜನಿಕರಿಗಾಗಿ ಸುಮಾರು 7 "ಶುದ್ಧ ಕುಡಿಯುವ ನೀರಿನ ಘಟಕ" ಗಳನ್ನು ನಿರ್ಮಿಸಲಾಗಿದೆ. ಇವು ನಾಗರಿಕರಿಗೆ ಉತ್ತಮ ಗುಣಮಟ್ಟದ ಮತ್ತು ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದೆ.
Covid-19 ರ 1ನೇ ಮತ್ತು 2ನೇ ಅಲೆಯ ಸಂದರ್ಭದಲ್ಲಿ ತೊಂದರೆಗೆ ಒಳಗೊಂಡವರನ್ನು ಗುರುತಿಸಿ ಅವರಿಗೆ ಆರೋಗ್ಯಕರವಾದ ದಿನಸಿ ಕಿಟ್, ಮಾಸ್ಕ್, ಮೆಡಿಕಲ್ ಕಿಟ್ ಮತ್ತು ಸಾನಿಟರ್ಗಳನ್ನು ಒದಗಿಸಲಾಗಿದೆ.
Covid-19 ರ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಕೋವಿಡ್ ನ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸುವ ಮತ್ತು ಎಲ್ಲರಿಗೂ Covid-19 ವ್ಯಾಕ್ಸೀನ್ ಎಟುಕುವ ವ್ಯವಸ್ಥೆ ಮಾಡುವ ಮೂಲಕ ವಾರ್ಡಿನಲ್ಲಿ ಸಂಭವಿಸಬಹುದಾಗಿದ್ದ ಸಾವು-ನೋವುಗಳ ಸಂಖ್ಯೆಯನ್ನು ಕಡಿತಗೊಳಿಸಲು ಹೆಚ್ಚಿನ ಶ್ರಮವನ್ನು ವಹಿಸಲಾಗಿದೆ.
ಪ್ರಸ್ತುತ, ಪದ್ಮನಾಭನಗರ ವಾರ್ಡಿನ ಪಕ್ಕದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ, ಒಂದೇ ಸೂರಿನಲ್ಲಿ ಈ ಕೆಳಗೆ ತಿಳಿಸಿರುವ ಕಛೇರಿಗಳನ್ನು ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ.
1. ಪೋಸ್ಟ್ ಆಫೀಸ್
2. ಲೈಬ್ರರಿ
3. ಹೊಲಿಗೆ ಯಂತ್ರ ತರಬೇತಿ ಕೇಂದ್ರ
4. BBMP ಕಂದಾಯ ಆಫೀಸ್
5. ಬೆಂಗಳೂರು - ಒನ್
ಪ್ರತಿವರ್ಷ, ವಾರ್ಡನ ಮಹಿಳೆಯರ ಕಲೆಗಳನ್ನು ಪ್ರೋತ್ಸಹಿಸುವ ಸಲುವಾಗಿ, ಈ ಕೆಳಗೆ ತಿಳಿಸಿರುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.
1. ರಂಗೋಲಿ ಸ್ಪರ್ಧೆ
2. ಸ್ಪೋರ್ಟ್ಸ್
ವಾರ್ಡಿನಲ್ಲಿ ಪಂಜಿನ ಮೆರವಣಿಗೆ ಮಾಡುವ ಮೂಲಕ ವಾರ್ಡಿನ ಸಾರ್ವಜನಿಕರಿಗೆ ರಾಷ್ಟ್ರದ ಜನರ ಕನಸಾದ "ರಾಮ ಮಂದಿರ" ನಿರ್ಮಾಣದ ಪ್ರಾಮುಖ್ಯತೆಯ ಅರಿವನ್ನು ಮೂಡಿಸುವ ಮೂಲಕ "ರಾಮ ಮಂದಿರ" ನಿರ್ಮಾಣ ಮಾಡಲು ವಾರ್ಡಿನ ಎಲ್ಲ ಜನರಿಂದ ಹೆಚ್ಚಿನ ದೇಣಿಗೆಯನ್ನು ಸಂಗ್ರಹಿಸಿ ಕಳುಹಿಸಿ ಕೊಡಲಾಗಿದೆ.
ವಾರ್ಡಿನ ಯುವಕರು ಸ್ವಾವಲಂಬಿಗಳಾಗಬೇಕೆಂಬ ಹಿತದೃಷ್ಟಿಯಿಂದ "ಉದ್ಯೋಗ ಮೇಳ" ದಂತಹ ಕಾರ್ಯಕ್ರಮಗಳ್ಳನ್ನು ನಡೆಸಲಾಗಿದ್ದು, ಅದರಲ್ಲಿ ಸುಮಾರು 100 ಪ್ರತಿಷ್ಠಿತ ಕಂಪನಿಗಳು ಹಾಗು 4000 ಸಾವಿರ ಯುವಕರು ಭಾಗವಹಿಸಿದ್ದು, ಅವರಲ್ಲಿ ಸುಮಾರು 500 ಯುವಕರಿಗೆ ಉದ್ಯೋಗ ಸಿಕ್ಕಿರುತ್ತದೆ.
ಪ್ರಮುಖ ಹಬ್ಬವಾದ ಸಂಕ್ರಾಂತಿಯಂದು ಜಾನಪದ ಜಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯ ಮಂತ್ರಿಗಳಾದ, ಶ್ರೀ ಯಡಿಯೂರಪ್ಪ, ಮಂತ್ರಿಗಳಾದ ಶ್ರೀ ಆರ್ ಅಶೋಕ್, ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಮತ್ತು ಇತರ ಗಣ್ಯರು ಭಾಗವಸಿರುತ್ತಾರೆ. ಪ್ರಮುಖವಾಗಿ ಈ ಕಾರ್ಯಕ್ರಮದಲ್ಲಿ, ರಾಜ್ಯದ ವಿವಿಧ ಸಾಂಸ್ಕೃತಿಕ ತಂಡಗಳು ಭಾಗವಹಿಸಿ, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು ಕೊಟ್ಟಿರುತ್ತವೆ.
ವಾರ್ಡನಲ್ಲಿ ನಿರಂತರವಾಗಿ ಕಾಡುತ್ತಿರುವ, ಕಸದ ಸಮಸ್ಯೆಯನ್ನು ಹೋಗಲಾಡಿಸಲು, ಹೆಚ್ಚಿನ ಮಹತ್ವವನ್ನು ನೀಡಿರುವುದಲ್ಲದೆ, ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಶ್ರಮವಹಿಸಲಾಗುತ್ತಿದೆ.
BBMP ವಾರ್ಡಿಗೆ ಸೇರಿದೆ ಗೋವಿನಾಯಕನಹಳ್ಳಿಯಲ್ಲಿ ಪಂಡಿತ್ ದೀನ ದಯಾಳ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗಾಗಿ ಸಂಕ್ರಾಂತಿ ಜಾತ್ರೆಯನ್ನು ಆಚರಿಸಲಾಗಿದ್ದು, ಆ ಕಾರ್ಯಕ್ರಮದಲ್ಲಿ ಸ್ಥಳೀಯ ನಾಗರಿಕರಿಂದ ಸುಗಮ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಬಡಾವಣೆಯ ಯುವಕರಿಗಾಗಿ B H S ಲೇಔಟ್ ನಲ್ಲಿ ಆಟದ ಮೈದಾನ ನಿರ್ಮಿಸಲು ಬಿಬಿಎಂಪಿ ವತಿಯಿಂದ ಅನುಮೋದನೆ ಪಡೆದಿದ್ದು, ಸದ್ಯದಲ್ಲಿಯೇ ಕೆಲಸ ಶುರುವಾಗಲಿದೆ.
ಪದ್ಮನಾಭನಗರದ ಶ್ರೀ ವಾಜಪೇಯಿ ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಸಹ ಪ್ರಗತಿಯಲ್ಲಿದೆ.